ಒಂದೊಮ್ಮೆ ಅನಿಸುವುದು ನಾನು ನೀನಾದೆ ಎಂದು.....
By Admin
January 12, 2026
48 views
* ಪ್ರತಿಯೊಂದರಲ್ಲೂ ಚೌಕಾಸಿ ಮಾಡ್ತಾ ಇದ್ದಾಗ " ಹೇ.. ಅಮ್ಮ ಬಾ ಎಲ್ರು ನೋಡ್ತಾ ಇದ್ದಾರೆ" ಅಂತ ಇದ್ದ ನಾನು ಈಗ, "ಸ್ವಲ್ಪ ಕಮ್ಮಿ ಮಾಡ್ತೀರಾ" ಅನ್ನೋದನ್ನ ಶುರು ಮಾಡಿಕೊಂಡೆ.....
* "ನೆಮ್ಮದಿ ಯಾಗಿ ನಿದ್ದೆ ಮಾಡ್ಲಿಕ್ಕೂ ಬಿಡಲ್ಲ. ಆ mixer, ಪಾತ್ರೆ ಶಬ್ದ ಸ್ವಲ್ಪ ಕಮ್ಮಿ ಮಾಡ್ತೀಯ" ಅಂತ ಬೆಳಗ್ಗೆ ಬೆಳಗ್ಗೆ ನಿನ್ನ ಮೇಲೆ ಎಗರಿ ಬೀಳ್ತಾ ಇದ್ದ ನಾನು ಬೆಳಿಗ್ಗೆ ಎದ್ದು ಶಬ್ದ ಮಾಡದೆ ಅಡುಗೆ ಮಾಡುವ ಪ್ರಯತ್ನದಲ್ಲಿ ಇನ್ನೂ ಇದ್ದೇನೆ
* ಪಲ್ಯ ಸುಟ್ಟಿತೇನೋ ಎಂದು ಹಳೇ ನೈಟಿ ಒಂದು ಟವೆಲ್ ಸುತ್ತಿ ಓಡಿ ಬರುವೆ, ಸುಟ್ಟಿದ್ದರೆ ತನಗಿರಲಿ, ಸರಿಯಿದ್ದರೆ ತನ್ನವರಿಗಿರಲಿ ಎಂದು...
* ಉಟ್ಟ ಸೀರೆ ಸರಿ ಮಾಡೋವಾಗ "ಹೇ ಹೋಗಮ್ಮ Old style ನಿಂದು" ಅಂತಿದ್ದೇ..
ಆದರೆ ಈಗ ಉಟ್ಟ ಸೀರೆ ಸರಿ ಆಗದೆ ಇರಲಿ ಅಂದುಕೊಳ್ಳುವೆ ಯಾಕಂದರೆ ನೀ ಬರುವೆ ಅದನು ಸರಿ ಮಾಡಲು ಎಂದು....
ನಾನು ನೀನಾದೆ , ನಾನು ಬದಲಾದೆ..😊
✍️ ಶರಣ್ಯ